ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನವು ಭಾರತದ ಆಂಧ್ರ ಪ್ರದೇಶ ರಾಜ್ಯದಲ್ಲಿದೆ.ಇದರ ವಿಸ್ತೀರ್ಣ ೩೫೩ ಚದರ ಕಿ.ಮೀ. ಈ ರಾಷ್ಟ್ರೀಯ ಉದ್ಯಾನದಲ್ಲಿ ಹಲವಾರು ಜಲಪಾತಗಳಿವೆ. == ಭೌಗೋಳಿಕ == ಇದು ಪೂರ್ವಘಟ್ಟದ ಶೇಷಾಚಲಂ ಪರ್ವತಶ್ರೇಣಿ ಮತ್ತು ತಿರುಪತಿ ಪರ್ವತಶ್ರೇಣಿಗಳಲ್ಲಿ ಹರಡಿಕೊಂಡಿದೆ. ಈ ಪ್ರದೇಶವು ಈಶಾನ್ಯ ಮಾರುತದಿಂದ ಹೆಚ್ಚಿನ ಮಳೆಯನ್ನು ಪಡೆಯುತ್ತದೆ. ಸಮುದ್ರ ಮಟ್ಟದಿಂದ ೧೫೦ರಿಂದ ೧೧೩೦ ಮೀಟರ್‍ವರೆಗೆ ಎತ್ತರವಿದೆ. == ಸಸ್ಯ == ಈ ಉದ್ಯಾನದಲ್ಲಿ ಪರ್ಣಪಾತಿ ಮತ್ತು ತೇವಭರಿತ ಪರ್ಣಪಾತಿ ಕಾಡುಗಳಿವೆ. ಈ ಪ್ರದೇಶದಲ್ಲಿ ೧೭೪ ಕುಟುಂಬಗಳಿಗೆ ಸೇರಿದ ಸುಮಾರು ೧೫೦೦ಕ್ಕೂ ಮಿಕ್ಕಿದ ನಾಳೀಯ ಸಸ್ಯ ವೈವಿಧ್ಯಗಳಿವೆ.ಇವುಗಳಲ್ಲಿ ಹಲವಾರು ಪ್ರಭೇದಗಳು ಅಳಿವಿನಂಚಿನಲ್ಲಿವೆ. == ಪ್ರಾಣಿಗಳು == ಸುಮಾರು ೧೭೮ ಜಾತಿಯ ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ. ಹಳದಿ ಕತ್ತಿನ ಬುಲ್‍ಬುಲ್, ಹಿಮಾಲಯ ಮತ್ತು ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ಹಸಿರು ಪಾರಿವಾಳ ಇಲ್ಲಿಯ ಪಕ್ಷಿ ಪ್ರಭೇದಗಳು. ಅಳಿವಿನಂಚಿನಲ್ಲಿರುವ ಬಿಳಿ ಬೆನ್ನಿನ ರಣಹದ್ದು ಸೇರಿದಂತೆ ಹಲವಾರು ಪಕ್ಷಿ ಪ್ರಭೇದಗಳು ಇಲ್ಲಿವೆ. ಸುಮಾರು ೩೦೦ ವರ್ಷಗಳ ಕಾಲ ಕಾಣದಿದ್ದ ಆನೆಗಳು ೧೯೯೩ರಲ್ಲಿ ಪ್ರತ್ಯಕ್ಷವಾಗಿ ಈಗ ಈ ಉದ್ಯಾನದ ಭಾಗವಾಗಿವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==